Derek Prince Ministries India
Founded on The Rock - Kannada
Founded on The Rock - Kannada
Couldn't load pickup availability
ಅನೇಕ ಸ್ಥಳಗಳಲ್ಲಿ, ವೇದವಾಕ್ಯವು, ಕ್ರೈಸ್ತೀಯ ಜೀವಿತವನ್ನು, ಒಂದು ಕಟ್ಟಡದ ನಿರ್ಮಾಣಕ್ಕೆ ಹೋಲಿಸುತ್ತದೆ. ಆ ಸ್ಥಳದಿಂದ ಪ್ರಾರಂಭವಾಗಿ, ಕಟ್ಟಲ್ಪಡುವ ಕಟ್ಟಡದ ಆಕಾರ ಮತ್ತು ರೀತಿಯನ್ನು, ಬುನಾದಿಯು ನಿರ್ಧರಿಸುತ್ತದೆ ಎಂದು ಡೆರಿಕ್‌ರವರು ಸ್ಪಷ್ಟವಾಗಿ ಹೇಳುತ್ತಾರೆ. ನಮ್ಮ ಬುನಾದಿಯು ಯೇಸು ಆಗಿದ್ದಾನೆ. ಆದರೆ ನಾವು ಆಳವಾಗಿ ಅಗೆಯಬೇಕು ಮತ್ತು ಯೇಸುವನ್ನು ಅರಿಯುವ ಹಾಗೂ ಆತನ ಮಾರ್ಗಗಳಲ್ಲಿ ನಡೆಯುವುದಕ್ಕೆ ಇರುವ ತಡೆಗಳನ್ನು ತೆಗೆದು ಹಾಕಬೇಕು. ಬೈಬಲ್, ದೇವರ ವಾಕ್ಯವನ್ನು ಲಿಖಿತ ರೂಪದಲ್ಲಿ ನೀಡಿದೆ; ಯೇಸುವು ಆ ವಾಕ್ಯದ ನರಾವತಾರ ಎತ್ತಿ ಬಂದಾತನು ಮತ್ತು ಅವರಿಬ್ಬರ ನಡುವೆ ಸಂಪೂರ್ಣ ಸಮ್ಮತಿಯಿದೆ. ಹಾಗಾಗಿ, ಐದು ಮುಖ್ಯ ಅಂಶಗಳು ನಮ್ಮ ಮುಂದಿವೆ : ದೇವರ ವಾಕ್ಯವನ್ನು ಅನುಸರಿಸುವುದರಿಂದ, ನಿಜವಾದ ಶಿಷ್ಯರೆಂದು ವ್ಯತ್ಯಾಸ ಬೀರುವುದು ವಿಧೇಯತೆಗೆ ಪ್ರೀತಿಯೇ ಸ್ಪೂರ್ತಿಯಾಗಿದೆ ತನ್ನ ವಾಕ್ಯವನ್ನು ಪಾಲಿಸುವವವರನ್ನು ಕಂಡು ತಂದೆಯು ಪ್ರೀತಿಸುತ್ತಾನೆ ದೇವರ ವಾಕ್ಯವನ್ನು ಪಾಲಿಸಿ ವಿಧೇಯರಾಗುವುದರಿಂದ ಕ್ರಿಸ್ತನು ತನ್ನನ್ನು ಪ್ರಕಟಪಡಿಸಿಕೊಳ್ಳುತ್ತಾನೆ ದೇವರ ವಾಕ್ಯದ ಮೂಲಕ, ತಂದೆ ಮತ್ತು ಮಗನು, ಶಿಷ್ಯನೊಳಗೆ ಬಿಡಾರ ಬೀರುತ್ತಾರೆ
Share

